ರಾಜಶೇಖರ ಇವರು ಸಂಸ್ಕೃತದ ಖ‍್ಯಾತ ಕವಿ,ನಾಟಕಕಾರ ಮತ್ತು ವಿಮರ್ಶಕ ರಾಗಿದ್ದರು. ಇವರು'ಗುರ್ಜರ ಪ್ರತಿಹಾರ'ದ ಸಾಮ್ರಾಜ್ಯದಲ್ಲಿ ಆಸ್ಥಾನ ಕವಿಯಾಗಿದ್ಡರು. ಇವರು 'ಕಾವ್ಯಮೀಮಾಂಸೆ' ಎಂಬ ಕಾವ್ಯವನ್ನು ಕ್ರಿ.ಶ.೮೮೦ ಮತ್ತು ಕ್ರಿ.ಶ.೯೨೦ ಇದರ ನಡುವೆ ಬರೆದಿದ್ದರು. ಇವರ ಪತ್ನಿ ಅವಂತಿಸುಂದರಿ ಕೂಡಾ ಈ ನಾಟಕದ ಅಭಿರುಚಿಯನ್ನು ಹೊಂದಿದ್ಡರು. == ಜೀವನ == ಬಾಲರಾಮಾಯಣ ಮತ್ತು ಕಾವ್ಯಮೀಮಾಮಮಂಸೆ, ಇವೆರಡಲ್ಲಿ ರಾಜಶೇಖರರಿವರು ತಮ್ಮನ್ನು ಗುರುತಿಸಿಕೊಂಡಿದ್ಡರು. ಬಾಲರಾಮಾಯಣದಲ್ಲಿ ಇವರು ತಮ್ಮ ಮುತ್ತಜ್ಜ ಅಕಲಜಲಂದರರವರನ್ನು ಉಲ್ಲೇಖಿಸಿದ್ದರು . ಅದೇ ನಾಟಕದಲ್ಲಿ ಇವರು ತಮ್ಮತಂದೆ ದುರ್ದುಕರವರನ್ನು ಮಹಾಮಂತ್ರಿಯಾಗಿ ವಿವರಿಸಿದ್ದಾರೆ. ಈ ನಾಟಕದಲ್ಲಿ ರಾಜಶೇಖರರಿವರು ತಮ್ಮ ಪತ್ನಿಯು ಚೌಹಾನ್ ಕುಟುಂಬಕ್ಕೆ ಸೇರಿದವರೆಂದು ತಿಳಿಸಿದ್ದಾರೆ. ಹಾಗೂ, ಇವರು ತಮಗೆ 'ಗುರ್ಜರ ಪ್ರತಿಹಾರ'ದ ಮಹಾರಾಜ,ಮಹೇಂದ್ರಪಾಲರವರು ಅಧ್ಯಾಪಕರಾಗಿದ್ದರು ಎಂದು ತಿಳಿಸಿದ್ದಾರೆ. = ಕೃತಿಗಳು = ಬಾಲರಾಮಾಯಣ. ಬಾಲಭಾರತ. ಕಾವ್ಯಮೀಮಾಂಸೆ. ಕರ್ಪೂರಮಂಜರಿ. ವಿದ್ಧಾಸಲಭನ್ಜಿಕ. = ಉಲ್ಲೇಖ =